Monday, 18 April 2011

ನೀ ಇದ್ದಾಗ

ಜೀವನ ತಂಗಾಳಿಯಂತೆ ಬೀಸುತ್ತಿತ್ತು,
ಗೆಳೆಯ ನೀ ಇದ್ದಾಗ....
ಭವಣೆ ಇಲ್ಲದ ಬದುಕಿತ್ತು,
ನಮ್ಮಿಬ್ಬರ ಮನ ಸೇರಿದ್ದಾಗ..

ಬರೀ ಸಿಹಿಯ ಸವಿ ಅನುಭವಿಸಿದ್ದೆ,
ಕಹಿ ಎಂಬುದ ಮರೆತಿದ್ದೆ,
ಮನಸಿನ ಮೌನವ, ಭಾವನೆಯಾಗಿ ಸುರಿಸಿದ್ದೆ...
ಮೌನಕ್ಕೂ ಮಾತು ಕಲಿಸಿತ್ತು,
ನಿನ್ನ ಒಲವು ಗೆಳೆಯ...

ನೀ ಸರಿದಾಡಿದರೆ ಸಾಕು,
ಮನಸ್ಸು ಮೈ ನೆರೆದ ಹೆಣ್ಣoತಾಗುತ್ತಿತ್ತು,
ಮೊಗ ಲಜ್ಜೆಯಿಂದ ನಾಚಿ ನೀರಗುತ್ತಿತ್ತು,
ಮೈ ಮನ ತುಂಬಿ ತುಳುಕುತ್ತಿತ್ತು,
ಉದ್ವೇಗದಿ ಕಂಪಿಸುತ್ತಿತ್ತು.....

ಮನ ಮೆರವಣಿಗೆ ಹೊರಟಂತೆ,
ನಾ ರಥದಲ್ಲಿ ಕುಂತಂತೆ,
ನೀ ಎದುರು ಬಂದಂತೆ...
ಎನೇನೋ ಗೆಳೆಯ...
ಬದುಕು ಗರಿಬಿಚ್ಚಿದ ಹಕ್ಕಿಯಂತೆ,
ಸ್ವಚ್ಚಂದವಾಗಿ ಹಾರಿತ್ತು.....

ಎಲ್ಲಿ ದೂರಾದೆಯೋ ನೀನು???
ಸವಿಯ ಸೊಬಗನ್ನು ಉಣಿಸಿ....

ಮಾಯವಾಗಿರುವ ನಿನ್ನ ಹುಡುಕುವ ತವಕವಿಲ್ಲ,
ಕಂಬನಿಯ ಮಿಡಿಯುತಿಲ್ಲ...
ನೀ ಕೊಟ್ಟ ನೆನಪಿನ ದೋಣಿಯಲ್ಲಿ ಕುಳಿತಿರುವೆ,
ಜೀವನದ ಸಮುದ್ರದಿ ಸುಖವಾಗಿ ಸಾಗುತಿರುವೆ,
ಅಲೆಗಳ ರಭಸವು ನವಿರಾಗಿ ಕಂಪಿಸುತ್ತಿದೆ....
ನಿನ್ನ ನೆನಪನ್ನು ಮೆಲುಕು ಹಾಕುತ,
ರಂಗೇರಿದ ನನ್ನ ಮೊಗವ ನೋಡಿ,
ಸಮುದ್ರವೇ ಶಾಂತವಾಗಿದೆ,
ಅಲೆಗಳ ಅಬ್ಬರವೂ ಇಳಿದಿದೆ...

ಸೀರೆಯ ಉಟ್ಟು ಕುಳಿತಿರುವೆ ನೆನಪಿನಂಗಳದಲ್ಲಿ,
ಹೆಣ್ತನವು ತುಂಬಿ ಹೊಳೆಯುತ್ತಿದೆ,
ಬೆಳದಿಂಗಳ ಬೆಳಕಿನಲ್ಲಿ....

ಚುಕ್ಕಿ ತಾರೆಗಳು ಕೇಳಿವೆ ಈ ಚೆಲುವೆ ಯಾರೆಂದು?
ಯಾವ ಚೆಲುವನಿಗಾಗಿ ಕಾಯುತಿಹಳೆಂದು????
ಪ್ರಕೃತಿಯೇ ಉತ್ತರಿಸಿದೆ,
ಈಕೆ ಬೆಳದಿಂಗಳ ಬಾಲೆಯೆಂದು,
ನೆನಪಿನಂಗಳದಲ್ಲಿ ಕುಳಿತಿಹಳೆಂದು.....

ಧನ್ಯನಾದೆನು ಗೆಳೆಯ ನಿನ್ನ ಪ್ರೀತಿಯ ಪರಿಗೆ,
ಮತ್ತೆ ಹೊರಬರಲಾರೆ ಕೊಚ್ಚಿ ಹೋಗಿರುವ ರಭಸಕ್ಕೆ.....



3 comments:

  1. ಪ್ರಾಪ್ಸ್,

    ಗೆಳೆಯನ ನೆನಪಿನ ವೀಣೆ ತನ್ನ೦ತೆ ತಾನೆ ಮಿಡಿದು,
    ನಾದ ಮಾಡಿದೆ ಅಕ್ಷರಗಳ ರೂಪದಲ್ಲಿ,
    ಭಾವ ಮೂಡಿಸಿದೆ ಕವನದಲ್ಲಿ.

    ಮತ್ತೊಮ್ಮೆ ಇಷ್ಟವಾದದ್ದು, ಪದ - ಭಾವಗಳ ಮಧುರ ಸಮ್ಮಿಲನ,

    ನಿಮ್ಮ ಕವನ, ಗೆಳೆಯನ ಮರೆಯಾಗದ ನೆನಪುಗಳು ಮನದೊಳಗೆ ಮೆರೆದಂತಿದೆ.. ಚೆನ್ನಾಗಿದೆ, ತುಂಬಾ ಇಷ್ಟವಾಯಿತು.....

    ವಂದನೆಗಳು,
    ಕರಿ

    ReplyDelete
  2. ಗೆಳೆಯನ ಬಗ್ಗೆ ಹೇಳಿರುವ ಪದಗಳು ತುಂಬಾ ಚೆನ್ನಗಿದೆ. ಹೀಗೆ ಬರಯುತೀರಿ.

    ReplyDelete
  3. I liked the below lines
    ಮನ ಮೆರವಣಿಗೆ ಹೊರಟಂತೆ,
    ನಾ ರಥದಲ್ಲಿ ಕುಂತಂತೆ,
    ನೀ ಎದುರು ಬಂದಂತೆ...
    ಎನೇನೋ ಗೆಳೆಯ...
    ಬದುಕು ಗರಿಬಿಚ್ಚಿದ ಹಕ್ಕಿಯಂತೆ,
    ಸ್ವಚ್ಚಂದವಾಗಿ ಹಾರಿತ್ತು.....

    Really nice one...

    ReplyDelete