ತಂಗಾಳಿಯು ಬಿಗಿದಪ್ಪಿದೆ ಒಂದು ಕ್ಷಣ.....
ಅಚ್ಹರಿಯ ಕಂಗಳಲಿ ಲಜ್ಜೆಯ ಹೊಳಪು,
ರಂಗೇರಿದ ಕೆನ್ನೆಗೆ ಒಂಥರಾ ನುಣುಪು.......
ಕಾರಣ ತಿಳಿಯುತ್ತಿಲ್ಲ ಈ ಸಂಭ್ರಮಕ್ಕೆ,
ತಿಳಿಯುವ ಹಂಬಲವಿಲ್ಲ ಈ ಗರಿಬಿಚ್ಚಿರುವ ನವಿಲಿಗೆ.......
ಹೊಳೆಯ ದಂಡೆಯಲಿ ಕೂತು ನಾಚಿ ನೀರಾಗುತಿರುವೆ,
ಸೂರ್ಯನ ಕಿರಣವ ಬಾಚಿ ಬಾಚಿ,
ಬಚ್ಚಿಡುವ ನೀರಿನ ಪರಿಗೆ ಕಂಗಾಲಾಗಿರುವೆ.....
ನನಗರಿವಿಲ್ಲದೆ ನನ್ನ ನಡುವಿಗು ಲಜ್ಜೆ ಬಂದಿದೆ,
ನನ್ನ ನಡುವ ನೋಡುತ,
ರವಿಯ ಮೊಗವು ರಂಗೇರಿದ ಹೂವಿನ ರಾಶಿಯಾಗಿದೆ........
ಅಯ್ಯೋ ಪೆದ್ದು ಮನವೇ,
ಮರೆತೆಯ ಕಾರಣವ???
ನಡೆಯುತ ಸಂಭ್ರಮದ ಹಾದಿಯಲಿ......
ಕಾರಣ ಹುಡುಕುವ ಹಂಬಲವಿಲ್ಲ,
ಸಂಭ್ರಮದ ಹಾದಿಯಲ್ಲಿ ನಡೆಯುವಾಗ....
ನನ್ನ ಇನಿಯನ ನೆನಪು,
ಅಣು ಅಣುವಲ್ಲು ಸಂಧಿಸಿರುವಾಗ.....
ಅವನ ಮುತ್ತಿನ ಮತ್ತಲ್ಲಿ ತೆಲಾಡುತಿರುವೆ,
ಬೆಲೆ ಕಟ್ಟಲಾಗದ ಅವ ನೀಡಿದ ಮುತ್ತನು,
ಕಪ್ಪೆಚಿಪ್ಪಲ್ಲಿ ಭದ್ರವಾಗಿಟ್ಟಿರುವೆ....
ಮತ್ತೊಂದು ಮುತ್ತಿಗೆ ಕಾಯುತ್ತಿರುವೆ ಇನಿಯ,
ಕೊಡಲಾರೆಯ????
ನೀ ನೆನಪಾದಾಗಲೆಲ್ಲ ತುಂಟತನ ಮೈ ತುಂಬಾ ಹರಿದು,
ಬೀಸುವ ತಂಗಾಳಿಗೆ ನಾಚಿಕೆಯ ಹೊದಿಕೆ ಹೊದಿಸಿ,
ಮಾನವ ಬೆಚ್ಚಗಾಗಿಸುವ ಆಸೆ ಕಣೋ......
ಆದರೆ ಅರಿವಿಲ್ಲದೆ ನಾಚಿಕೆ ಮೈಇಂದ ಹರಿದು,
ಮನ ತಂಗಾಳಿಯೆಡೆಗೆ ವಾಲುವಾಗ,
ಪುಟ್ಟ ಕಂಗಳಲಿ ಅಚ್ಚ್ಹರಿಯ ಧಾರೆ ಸುರಿಯುವುದು ಕಣೋ....
ಈ ಸಂಭ್ರಮದ ಹಾದಿ ಕೊನೆಯಾಗಲಾರದೆಂಬ,
ಭರವಸೆಯಿಂದ ಸಾಗುತಿರುವೆ....
ಕೊನೆಯಾದರು ನೋವಿಲ್ಲ,
ತಿರುಗಿ ಮತ್ತೆ ನಿನ್ನೆಡೆಗೆ ಪಯಣ.....
ಅದೇ ಮುತ್ತು, ಅದೇ ಅಪ್ಪುಗೆ, ಅದೇ ತುಂಟತನ.......
ಈ ಪಯಣ ಎಂದೂ ಕೊನೆಯಾಗದ ಮೋಹಕ,
ನನ್ನ ಅಣು ಅಣುವಲು ನೀ ಬೆರೆತಿರುವ ತನಕ..........
ಪ್ರಾಪ್ತಿ, ನಿಮ್ಮ ಕವಿತೆ ಹೃದಯವನ್ನು ಸಂಭ್ರಮಿಸುತ್ತದೆ. ಒಂದೊಂದು ವಾಕ್ಯಗಳೂ ಮನಸಿನಾಳದಿಂದ ಬಂದ0ತಿವೆ.ಸು೦ದರ ಸಾಲುಗಳು ಸಂಭ್ರಮದತ್ತ ಸಾಗಿವೆ...
ReplyDeleteಕವನದ ಮೊದಲು ಮತ್ತು ಕೊನೆಗಿರುವ ಸಂಭ್ರಮದ ಭಾವನೆ ತುಂಬ ಇಷ್ಟವಾಯಿತು.
ತುಂಗೆ ಜುಳು ಜುಳು ಹರಿದು ಸಾಗರವಾದ ಹಾಗೆ, ಚಿಗುರು ಮರವಾಗಿ ಬೆಳೆದ ಹಾಗೆ. ಆದರೆ, ಓದುತ್ತಾ ಹೋದಂತೆ ಮನ ಭಾರವಾಯ್ತು.
ಸಂಭ್ರಮ ಹುಡುಕಿ ಹೊರಟಿರೋ ಪಥದಲ್ಲಿ ನಿಮ್ಮ ಕನಸಿನ ಇನಿಯ ಎದುರಾಗಲಿ.. :)
ವಂದನೆಗಳು.
Hi Praps,
ReplyDeleteKavana superagi mudibandidhe.
Kelakanda salugalu ninna vyakthithvakhe holikeyantedhe....
ಈ ಸಂಭ್ರಮದ ಹಾದಿ ಕೊನೆಯಾಗಲಾರದೆಂಬ,
ಭರವಸೆಯಿಂದ ಸಾಗುತಿರುವೆ....
ಕೊನೆಯಾದರು ನೋವಿಲ್ಲ,
ತಿರುಗಿ ಮತ್ತೆ ನಿನ್ನೆಡೆಗೆ ಪಯಣ.....
ಅದೇ ಮುತ್ತು, ಅದೇ ಅಪ್ಪುಗೆ, ಅದೇ ತುಂಟತನ.......
Mathashtu kavanagalu himpagi mudibarali...
Nerikshe yalli ninna geleya,
Ullas :)
Sambhramavoooooooooo Sambhrama... Superagide,
ReplyDeleteThought of buying some Kannada Kavana books.. Great going.. keep it up....
ಈ ಗೆಳತಿಯ ಅಂತರಂಗದ ಒಂದು ಲುಕ್ ಕಣೋ ಗೆಳೆಯ:-
ReplyDeleteಭೂಮಿಗೆ ಬಂದ ಈ ದಿನ ಯೋಚಿಸಿದ್ದೆಯಾ ನೀನು....
ನನ್ನ ಹೃದಯದಲ್ಲಿ ಜಾಗ ಪಡೆಯುವೆ ಎಂದು????
ನನ್ನ ನೂರಾರು ಹಾರೈಕೆ ನಿನಗಾಗಿಯೆ ಎಂದು??
ಆಸೆ ಪಡುತ್ತಿರುವೆ ಗೆಳೆಯ !!
ನಿನ್ನ ಪ್ರೀತಿ ಹಾರೈಕೆಗಳ ಜಡಿ ಮಳೆಗೆ ಕೊಚ್ಚಿ ಹೋಗಬೇಕೆಂದು,
ಕೊನೆ ಮುಟ್ಟಬಾರದೆಂದು,
ನನಸಾಗುವುದೇ ಈ ಹುಚ್ಚು ಆಸೆ?
ಕಾಡಿಸಿ ಪೀಡಿಸುವ ಆಸೆ,
ಅರಿವಿದ್ದರು ತಪ್ಪೆಸಗುವ ಆಸೆ ಕಣೋ....
ನಿನ್ನ ಸಂಕಟವನ್ನು ನೋಡಿ,
ನಿನ್ನ ಕಣ್ಣಲ್ಲಿ ಪ್ರೀತಿ ಕಾಣುವ ಬಯಕೆ ಕಣೋ.....
ಬೈಗುಳದ ಕರಿ ಮೋಡವನ್ನು ಹೊತ್ತು ತಂದು,
ಸಮಾದನದ ಮಳೆಯನ್ನು ಸುರಿಸಿ,
ಅಪ್ಪುಗೆಯ ಸುವಾಸನೆಯನ್ನು ಬೀರುವ,
ನಿನ್ನ ಪರಿಯ ನೋಡುವ.... ತವಕ ಕಣೋ.... ಹುಡುಗ.
ಆಗಾಗ ಮೋಡವಿಲ್ಲದೇ ಮಳೆ ಸುರಿಸುವ ನೀನು....
ಅರ್ಥವಾಗದೆ ಉಳಿಯುವೆಯಲ್ಲೋ ನನ್ನ ಮನಸಿನಲ್ಲಿ......
ನಿನ್ನನ್ನ ಎಲ್ಲದಕ್ಕೂ ಹೋಲಿಸುವ ಆಸೆ ಕಣೋ,
ಎಲ್ಲದನ್ನು ಮೀರಿದ ನಿನ್ನನ್ನು....
ಹೂಲಿಸಲಾರದೆ.... ಬೆಪ್ಪಾಗಿ ಕುಳಿಸುವ,
ಈ ತಳಮಳವು ಹೌದು ಕಣೋ!!!
ಆದರು ಕಾಯುತ್ತಿರುವೆ,
ಆ ಮೋಡಕ್ಕಾಗಿ, ಆ ಮಳೆಗಾಗಿ, ಆ ಸುವಾಸನೆಗಾಗಿ,
ಬರುವೆಯಾ ಅವೆಲ್ಲವನು ಹೊತ್ತು,
ಈ ಪ್ರೀತಿಯ ಗೆಳತಿಗಾಗಿ?????