Tuesday, 12 April 2011

ಈ ಗೆಳತಿಯ ಅಂತರಂಗದ ಒಂದು ಲುಕ್ ಕಣೋ ಗೆಳೆಯ

ಭೂಮಿಗೆ ಬಂದ ಈ ದಿನ ಯೋಚಿಸಿದ್ದೆಯಾ ನೀನು....
ನನ್ನ ಹೃದಯದಲ್ಲಿ ಜಾಗ ಪಡೆಯುವೆ ಎಂದು????
ನನ್ನ ನೂರಾರು ಹಾರೈಕೆ ನಿನಗಾಗಿಯೆ ಎಂದು??

ಆಸೆ ಪಡುತ್ತಿರುವೆ ಗೆಳೆಯ !!
ನಿನ್ನ ಪ್ರೀತಿ ಹಾರೈಕೆಗಳ ಜಡಿ ಮಳೆಗೆ ಕೊಚ್ಚಿ ಹೋಗಬೇಕೆಂದು,
ಕೊನೆ ಮುಟ್ಟಬಾರದೆಂದು,
ನನಸಾಗುವುದೇ ಈ ಹುಚ್ಚು ಆಸೆ?

ಕಾಡಿಸಿ ಪೀಡಿಸುವ ಆಸೆ,
ಅರಿವಿದ್ದರು ತಪ್ಪೆಸಗುವ ಆಸೆ ಕಣೋ....
ನಿನ್ನ ಸಂಕಟವನ್ನು ನೋಡಿ,
ನಿನ್ನ ಕಣ್ಣಲ್ಲಿ ಪ್ರೀತಿ ಕಾಣುವ ಬಯಕೆ ಕಣೋ.....
ಬೈಗುಳದ ಕರಿ ಮೋಡವನ್ನು ಹೊತ್ತು ತಂದು,
ಸಮಾದನದ ಮಳೆಯನ್ನು ಸುರಿಸಿ,
ಅಪ್ಪುಗೆಯ ಸುವಾಸನೆಯನ್ನು ಬೀರುವ,
ನಿನ್ನ ಪರಿಯ ನೋಡುವ.... ತವಕ ಕಣೋ.... ಹುಡುಗ.

ಆಗಾಗ ಮೋಡವಿಲ್ಲದೇ ಮಳೆ ಸುರಿಸುವ ನೀನು....
ಅರ್ಥವಾಗದೆ ಉಳಿಯುವೆಯಲ್ಲೋ ನನ್ನ ಮನಸಿನಲ್ಲಿ......

ನಿನ್ನನ್ನ ಎಲ್ಲದಕ್ಕೂ ಹೋಲಿಸುವ ಆಸೆ ಕಣೋ,
ಎಲ್ಲದನ್ನು ಮೀರಿದ ನಿನ್ನನ್ನು....
ಹೂಲಿಸಲಾರದೆ.... ಬೆಪ್ಪಾಗಿ ಕುಳಿಸುವ,
ಈ ತಳಮಳವು ಹೌದು ಕಣೋ!!!

ಆದರು ಕಾಯುತ್ತಿರುವೆ,
ಆ ಮೋಡಕ್ಕಾಗಿ, ಆ ಮಳೆಗಾಗಿ, ಆ ಸುವಾಸನೆಗಾಗಿ,
ಬರುವೆಯಾ ಅವೆಲ್ಲವನು ಹೊತ್ತು,
ಈ ಪ್ರೀತಿಯ ಗೆಳತಿಗಾಗಿ?????

1 comment:

  1. ಪ್ರಾಪ್ಸ್...

    ಸುಂದರ ಕವನ...ಮನಸಲ್ಲಿರೋ ಪ್ರೀತಿನಾ ಪ್ರಿಯತಮನಿಗೆ ಹೇಳೋ ರೀತಿ ಚೆನ್ನಾಗಿ ಮೂಡಿಬಂದಿದೆ...
    ಅಂತರಂಗದ ಆಸೆಯನ್ನು ಬಗೆ ಬಗೆಯಾಗಿ ಕಲ್ಪಿಸಿಕೊಂದಿದ್ದೀರಲ್ಲ...... ಸೂಪರ್..... ಸಕತ್ತಾಗಿದೆ....

    ಆದರು ಕಾಯುತ್ತಿರುವೆ,
    ಆ ಮೋಡಕ್ಕಾಗಿ, ಆ ಮಳೆಗಾಗಿ, ಆ ಸುವಾಸನೆಗಾಗಿ,
    ಬರುವೆಯಾ ಅವೆಲ್ಲವನು ಹೊತ್ತು,
    ಈ ಪ್ರೀತಿಯ ಗೆಳತಿಗಾಗಿ?????


    ಇಂತಹ ಸಾಲುಗಳು ಕವನವನ್ನು ಮತ್ತೆ ಮತ್ತೆ ಓದುವಂತೆ ಮಾಡಿದವು...
    ಪ್ರೀತಿ ಹುಡುಕಿ ಹೊರಟಿರೋ ಪಥದಲ್ಲಿ ಬೆಳಕು ಎದುರಾಗಲಿ.. :)



    ಇಂತ ಘಮ ಘಮ ಕವಿತೆ ಬರೀತಿದ್ರೆ ಮೂಸುವ, ಸುಗಂಧ ಸವಿಯುವ ದುಂಬಿಗಳ ದಂಡೇ ನೆರೆಯುತ್ತದೆ ಬಿಡಿ..
    ಅದ್ಭುತವಾಗಿದೆ.. ಮತ್ತೊಮ್ಮೆ ಇಷ್ಟವಾದದ್ದು... ಪದಗಳ ಬಳಕೆ...


    ವಂದನೆಗಳು,
    ಕರಿ...

    ReplyDelete