ಕನಸು ಏನೆಂದು ಹುಡುಕಿದೆ,
ತಿಳಿಯದಾದೆ ಉತ್ತರ,
ತಿಳಿಯಿತು ಕೊನೆಯಲಿ,
ನಾನಿರುವುದೆ ಕನಸಿನ ಲೋಕದಲಿ.....
ಕನಸೊಂದ ಕಂಡೆ,
ಕ್ಷಣಿಕದ ಖುಷಿಯಲ್ಲಿ ಮಿಂದೆ,
ಬಾಡಿತು ಕನಸು, ನೊಂದಿತು ಮನ,
ಮಿಡಿದಿದೆ ಕಂಬನಿ, ಕರಗಿದೆ ಕಣ್ಣು.....
ಕನಸು ಜಾರುತಿದೆ ಕಂಬನಿಯಾಗಿ,
ಮನಸು ಮರುಗಿದೆ ತಬ್ಬಲಿಯಾಗಿ.....
ಕಳೆದೊಗಿರುವ ಕನಸ ಹುಡುಕುತ ಹೊರಟಿರುವೆ,
ಮರಳಿ ಪಡೆಯುವೆ ಎಂಬ ಕನಸ ಹೊತ್ತು....
ಕನಸೊಳಗೆ ಕನಸಿನ ಬಲೆ,
ಸಿಗುವುದೇ ಬದುಕಿಗೆ ನೆಲೆ,
ಕೊಡುವೆಯಾ ನೀನು ಸ್ಪೂರ್ತಿಯ ಸೆಲೆ????
ಮನಸು ಮತ್ತೆ ಜಾರುತಿದೆ ಕನಸಿನ ಲೋಕಕೆ.......
ಪ್ರಾಪ್ಸ್,
ReplyDeleteಬಾವನೆಗಳಿಂದ ತುಂಬಿದ ಕನಸಿನ ಕವನ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಇಷ್ಟವಾಯ್ತು.
ನಿನ್ನ ಗೆಳೆಯನಿಗೆ ನೀಡಿದಂತಿದೆ ಕೊನೆಯ ಆಶಾಭಾವ.. :)
ಕಹಿಯಿಂದ ಸಿಹಿಕನಸಿನ ಲೋಕದ ಪಯಣಕ್ಕೆ ಸಾಂತ್ವನ ಹೇಳಲು ಹೊರಟ ಈ ಗೆಳೆಯನ ಸಣ್ಣ ಪ್ರಯತ್ನ ಹೀಗಿದೆ....
ತಲ್ಲಣಿಸದಿರು ಗೆಳತಿ..
ಬೀಸುವುದು ತಂಗಾಳಿ..
ಕಾಡ ಮಧ್ಯದಲಿ ಹುಣ್ಣಿಮೆ ಸುರಿದಂತೆ,
ಸಂಜೆಗತ್ತಲಿನಲಿ ಸೋನೆಮಳೆ ಹಿಡಿದಂತೆ,
ಮತ್ತೆ ನನಸಾಗುವುದು ಕನಸು,
ಕಾಲ ಸರಿದಂತೆ...
ಹೀಗೆ ಈ ಸೊಗಸಾಗಿರುವ ತೋಟದಲ್ಲಿ ಬಗೆ ಬಗೆಯ ಹೂವು ಬೆಳೆಸ್ತಾಯಿರಿ ಎಂದು ಬಯಸುವ
ಕರಿ
Wow... Prapthi, this is one of recent times best writing i have come across
ReplyDeleteit's tremendous portray Prapti.. well done..! keep it up.
ReplyDeletesuperb & keep the gud work going
ReplyDeleteNice
ReplyDeleteThank u all for all ur wonderfull comments
ReplyDelete